ಸಖಿ....
ಆಕೆಯೇ ಬೇಕೆಂದಿದ್ದರೆ
ಹೇಗೋ
ಪಡೆಯಬಹುದಾಗಿತ್ತು...
ಆದರೆ ...
ನಾನೇ ಬೇಕೆಂಬಾಕೆಗಾಗಿ
ಕಾಯುತ್ತಿದ್ದೆ....
ಕಾಯುವಿಕೆಯೂ
ವ್ಯರ್ಥಾವಾಗುತ್ತದೆಂದು
ಗೊತ್ತಿರಲಿಲ್ಲ....
ಮೆಚ್ಚಿ ಬಂದವಳು
ಹೆಚ್ಚು ದಿನ
ನನ್ನವಳಾಗಿರಲಿಲ್ಲ...
ಮತ್ತೆ ಮರಳಿ ಯತ್ನ ಮಾಡುವ
ವಯಸ್ಸು-ಮನಸ್ಸು
ಎರಡೂ ಈಗಿಲ್ಲ ....!
--ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ