ಸಖಿ.....
ರೈತಾ ಮತ್ತು ಕವಿತಾ
ಎರಡೂ ಒಂದೇ.....
ಎಷ್ಟೇ ಗೇಯ್ದರೂ ರೈತ
ಲಾಭಾ ಅನ್ನೋದು ಇಲ್ಲಾ!
ಎಷ್ಟೇ ಬರೆದರೂ ಕವಿತಾ
ಕೇಳೋ ಕಿವಿಗಳು ಇಲ್ಲ!
* * * * *
ಕಾವ್ಯ ಬರಿಯೋದು
ಬುದ್ದಿ ಹೇಳೋದಕ್ಕಲ್ಲ
ಬುದ್ದಿ ಕಲಿಯೋದಕ್ಕ
ಅಂದ್ಕೊಂಡವಾ ಕವಿ !
* * * * *
ಕಿವುಡಾದಾಗ
ಕವಿತೆ ಕೇಳುವ ಕಿವಿಗಳು,
ಹುಟ್ಟಿಕೊಳ್ಳುತ್ತಾರೆ
ಫೇಸ್ ಬುಕ್ ಕವಿಗಳು.
ಕುರುಡಾದಾಗ
ಪ್ರಜೆಗಳನ್ನಾಳುವ ಪ್ರಭುಗಳು,
ಪ್ರತಿಭಟಿಸುತ್ತಾರೆ
ಗಟ್ಟಿದ್ವನಿಯಲ್ಲಿ ನೆಟ್ಟಿಗರು.
ಮೂಕವಾದಾಗ
ದಮನಿತರ ದ್ವನಿಗೆ ಮಾಧ್ಯಮಗಳು,
ಇಂಟರನೆಟ್ ತುಂಬಾ
ಕಾಮೆಂಟುಗಳು.
* * * * *
ಥೂ! ಕವಿತೆ ಬರೆಯೋದು ಕೆಲಸಾನಾ?
ಲಾಭಾ ಇಲ್ಲದ್ದೊಂದು ದುಡಿಮೇನಾ? ಅಂತಾರಲ್ಲಾ !!!
ಎಷ್ಟೇ ಗಳಿಸಿ ಎಷ್ಟೇ ಉಳಿಸಿ ಕೊಂಡ್ಕೋಬಹುದಾ ನೆಮ್ಮದೀನಾ!
ಒಳ್ಳೇ ಕವಿತೆ ಬರ್ದು ಓದಿ ನೋಡಿ ಕಾಣಬಹುದು ಸ್ವರ್ಗಾನಾ !!
-ಶಶಿಕಾಂತ ಯಡಹಳ್ಳಿ
ಲಾಭಾ ಅನ್ನೋದು ಇಲ್ಲಾ!
ಎಷ್ಟೇ ಬರೆದರೂ ಕವಿತಾ
ಕೇಳೋ ಕಿವಿಗಳು ಇಲ್ಲ!
* * * * *
ಕಾವ್ಯ ಬರಿಯೋದು
ಬುದ್ದಿ ಹೇಳೋದಕ್ಕಲ್ಲ
ಬುದ್ದಿ ಕಲಿಯೋದಕ್ಕ
ಅಂದ್ಕೊಂಡವಾ ಕವಿ !
* * * * *
ಕಿವುಡಾದಾಗ
ಕವಿತೆ ಕೇಳುವ ಕಿವಿಗಳು,
ಹುಟ್ಟಿಕೊಳ್ಳುತ್ತಾರೆ
ಫೇಸ್ ಬುಕ್ ಕವಿಗಳು.
ಕುರುಡಾದಾಗ
ಪ್ರಜೆಗಳನ್ನಾಳುವ ಪ್ರಭುಗಳು,
ಪ್ರತಿಭಟಿಸುತ್ತಾರೆ
ಗಟ್ಟಿದ್ವನಿಯಲ್ಲಿ ನೆಟ್ಟಿಗರು.
ಮೂಕವಾದಾಗ
ದಮನಿತರ ದ್ವನಿಗೆ ಮಾಧ್ಯಮಗಳು,
ಇಂಟರನೆಟ್ ತುಂಬಾ
ಕಾಮೆಂಟುಗಳು.
* * * * *
ಥೂ! ಕವಿತೆ ಬರೆಯೋದು ಕೆಲಸಾನಾ?
ಲಾಭಾ ಇಲ್ಲದ್ದೊಂದು ದುಡಿಮೇನಾ? ಅಂತಾರಲ್ಲಾ !!!
ಎಷ್ಟೇ ಗಳಿಸಿ ಎಷ್ಟೇ ಉಳಿಸಿ ಕೊಂಡ್ಕೋಬಹುದಾ ನೆಮ್ಮದೀನಾ!
ಒಳ್ಳೇ ಕವಿತೆ ಬರ್ದು ಓದಿ ನೋಡಿ ಕಾಣಬಹುದು ಸ್ವರ್ಗಾನಾ !!
-ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ