ಶನಿವಾರ, ಮೇ 23, 2015

ಸಖಿ ಗೀತೆ.....152

ತರಲೆ ಕಾವ್ಯ :

ಸಖಿ...

ಮಗು ಹುಟ್ಟಿದ ನಂತರ
ಹೆಸರಿಡ್ತಾರೆ,
ಚಿಕ್ಕ ಈರ ರಾಮ ಮಾರ
ಅಂತೆಲ್ಲಾ ಕರೀತಾರೆ......!

ಹಾಗೆಯೇ
ನರಮನುಷ್ಯ
ಸತ್ತ ಮೇಲೆ
ಬರೀ ಹೆಣ ಅಂತಾರೆ
ಹೂತು ಬಿಡ್ತಾರೆ .....!!

ಆದರೆ...

ಕೋಳಿದೆಂತಾ ಸೌಭಾಗ್ಯ
ಸತ್ತ ಮೇಲೆ ಹೆಸರಿಡ್ತಾರೆ,
ಚಿಕನ್ ಚಿಲ್ಲಿ, ಚಿಕನ್ ಟಿಕ್ಕಾ,
ಚಿಕನ್ ತಂದೂರಿ, ಲಾಲಿಪಪ್
ಅಂತೆಲ್ಲಾ ಕರೀತಾರೆ.....!!!

ಸತ್ತ ಮೇಲೂ ಕುಕ್ಕಟ
ಹೆಣವಾಗುವ ಬದಲು
ಆಹಾರವಾಗಿ ಜನರುದರದಲಿ
ಅಮರವಾಗುವ ಪರಿಗೆ
ಏನಂತಾರೆ ....?

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ