ಶನಿವಾರ, ಮೇ 23, 2015

ಸಖಿ ಗೀತೆ....151

ಸಖಿ....

ಎಲ್ಲರೂ
ಒಳ್ಳೆಯವರಲ್ಲ

ಆದರೂ...

ಎಲ್ಲರಲ್ಲೂ
ಒಂದಿಷ್ಟಾದರೂ
ಒಳ್ಳೇತನ
ಇದ್ದೇ ಇರುತ್ತದಲ್ಲಾ...!

ಅದಕ್ಕಾಗಿಯಾದರೂ
ಮನುಷ್ಯರನ್ನು
ಪರಸ್ಪರ
ಪ್ರೀತಿಸಬೇಕಿದೆ

ಕೆಟ್ಟವರನ್ನು
ಒಳ್ಳೆಯವರಾಗಿಸುವ
ಅಪಾರ ಶಕ್ತಿ 
ಪ್ರೀತಿಗಿದೆ....

...ಎಂಬ ನಂಬಿಕೆ ನಿನಗಿದ್ದರೆ
ನಾನೂ ಕೆಟ್ಟವನೇ
ಒಳ್ಳೆಯವನಾಗಬೇಕಿದೆ
ಬಾ ಪ್ರೀತಿಸು..........!!!

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ