ಶುಕ್ರವಾರ, ಮೇ 22, 2015

ಸಖಿ ಗೀತೆ.......150

ಸಖಿ..

ಬದುಕಿರುವಾಗ
ನಾನ್ಯಾರಿಗೂ
ನೋವು 
ಕೊಡಲಿಲ್ಲ..!

ಹಾಗಾಗಿ
ನನಗೆಂದೂ
ಸಾವೆನ್ನುವುದು
ಬಾರದಿರಲಿ...!!

ಯಾಕೆಂದರೆ...
ಸತ್ತ ಮೇಲಾದರು
ನನ್ನವರಿಗೆ
ನಾನ್ಯಾಕೆ
ದುಃಖ ಕೊಡಬೇಕು...?

ಆವರೇಕೆ
ಬಾಯಿ
ಬಡಿದುಕೊಂಡು
ಅಳಬೇಕು...?

ಹೀಗಾಗಿ....

ಎಲ್ಲರ
ಮರಣದ
ನಂತರ ನಾ
ಸಾಯುವಂತಾಗಲಿ..!!

ಅಲ್ಲಿವರೆಗೂ
ನಾ ನಗುತ
ಎಲ್ಲರ ನಗಿಸುತ
ಹೇಗೆಯೇ ಇರಲಿ....!!!

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ