ಶುಕ್ರವಾರ, ಮೇ 22, 2015

ಸಖಿ ಗೀತೆ.....148

ಸಖಿ....

ಎಂದೂ ಬೆಳಕು
ಕತ್ತಲೆಯ ಶತ್ರುವಲ್ಲ...

ಬೆಳಕಿಲ್ಲದಿರುವುದು
ಬೆಳಕಿನ ಸಮಸ್ಯೆಯೇ
ಹೊರತು ಕತ್ತಲೆಯದಲ್ಲ...!

ಹಾಗೆಯೇ ವಿರಹ
ಪ್ರೀತಿಯ ಶತ್ರುವಲ್ಲ..

ಪ್ರೀತಿ ದೂರಾಗಿರುವುದು
ಪ್ರೀತಿಸುವವರ ಸಮಸ್ಯೆಯೇ
ಹೊರತು ವಿರಹದ್ದಲ್ಲ....!!

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ