ಶುಕ್ರವಾರ, ಮೇ 22, 2015

ಸಖಿ ಗೀತೆ.....147

ಸಖಿ...

ಎಲ್ಲವನ್ನೂ
ಮುಗಿಸಲೇಬೇಕು
ಕವಿತೆ ಇರಲಿ
ಕಥೆ ಇರಲಿ...

ಎಲ್ಲವೂ
ಮುಗಿಯಲೇಬೇಕು
ಬದುಕಾಗಿರಲಿ
ಸಂಬಂಧವಿರಲಿ...

ಮುಗಿಸುವ ಮುನ್ನ
ಅನ್ಯರೆದೆಯಲಿ ಸವಿ
ನೆನಪಾಗುಳಿದರೆ
ಎಲ್ಲವೂ ಸಾರ್ಥಕ..

ಕಥೆ ಕಾವ್ಯ
ಭಾವ ಬದುಕು
ಸ್ಪಂದಿಸದಿದ್ದರೆ
ಎಲ್ಲವೂ ನಿರರ್ಥಕ...!!

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ