ಶುಕ್ರವಾರ, ಮೇ 22, 2015

ಸಖಿ ಗೀತೆ....144

ಸಖಿ...

ಪೂರ್ವಾಗ್ರಹಗಳೆಲ್ಲವ
ತೊರೆದು ಬಂದರೆ
ಆದೀತು
ನನಗೂ ನಿನಗೂ
ಸಂವಾದ...!

ತಾಳ್ಮೆಗೆಟ್ಟು
ತವುಡು
ಕುಟ್ಟಿದರೆ
ಬದುಕೆಲ್ಲಾ
ಬರೀ.ವಾದ....!!

ತೆಗೆದು ಬಿಸಾಡು
ಬಣ್ಣದ ಕನ್ನಡಕಗಳ
ಬೆತ್ತಲೆ ಕಣ್ಣಲ್ಲಿ
ಬದುಕು ನೊಡೋಣ
ಬೇಡ ವಿತಂಡವಾದ....!!!

-ಯಡಹಳ್ಳಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ