ಶುಕ್ರವಾರ, ಮೇ 22, 2015

ಸಖಿ ಗೀತೆ.... 143

ಸಖಿ.....

ಬದುಕಿನ
ಆಘಾತಗಳ
ನಡುವೆ
ಪುಟ್ಟದಾದ
ಅಡಗುದಾಣ
ನನ್ನೀ ಕವಿತೆ....!

ಅಂತರಂಗದ
ತಲ್ಲಣಗಳಿಗೆ
ಹೊರದಾರಿ ತೋರಿ
ತಣ್ಣಗಾಗಿಸುವ
ಹೊರದಾರಿ
ನನ್ನೀ ಕವಿತೆ....!!

ನಿರೀಕ್ಷೆಗಳೆಲ್ಲಾ
ನಿರಾಸೆಗಳಾದಾಗ,
ನಂಬಿದವರೆಲ್ಲಾ
ವಂಚಕರಾದಾಗ.
ಮರುಭೂಮಿಯಲಿ
ಓಯಸಿಸ್ ಒರತೆ
ನನ್ನೀ ಕವಿತೆ.......!!!

ಸಹನೆ ಮೀರಿ
ಬದುಕೆಂಬುದು
ಅಸಹನೀಯವಾದಾಗ
ಮನಕೆ ಸಾಂತ್ವನ
ಹೇಳಲಾದರೂ ಬೇಕು
ನನಗೀ ಕವಿತೆ.....!!!!

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ