ಶುಕ್ರವಾರ, ಮೇ 22, 2015

ಸಖಿ ಗೀತೆ....141

ಸಖಿ.......

ಮಾಡರ್ನ
ಮಹಿಳೆ
ಮಾಧ್ಯಮಗಳಲ್ಲಿ 
ಒತ್ತಾಯಿಸುತ್ತಿದ್ದಾಳೆ...

ಪ್ರೇಮ ಕಾಮ
ಬಟ್ಟೆ ಬೆತ್ತಲೆ
ಅಕ್ರಮ ಅನೈತಿಕತೆಗಳೆಲ್ಲಾ
ನನ್ನ ಆಯ್ಕೆ...!

ಹೆಣ್ಣು ಹರಿಯುವ ನೀರು
ದೊಣ್ಣೇನಾಯಕರಪ್ಪನೆ ಬೇಕೆ?
* * * * *

ಗಂಡು ಹೆಣ್ಣು ಹೀಗೆ...
ಅವರವರ ಬಯಕೆಗೆ
ಆಯ್ಕೆಗೆ ಕಟಿಬದ್ಧರಾದರೆ,

ಸಲಿಂಗ ದ್ವಿಲಿಂಗ
ಲಿಂಗಾಂಗ ಸಂಗಮ
ರಾಷ್ಟ್ರೀಕರಣಗೊಂಡರೆ...

ಅತೃಪ್ತ ಆತ್ಮಗಳ
ಅಕ್ರಮಗಳೆಲ್ಲಾ ಸಕ್ರಮ
ಎಲ್ಲಾ ಮುಕ್ತ ಮುಕ್ತ ಮುಕ್ತ..!!!
* * * * *

ಕೇಳುವವರಿಲ್ಲ
ಹೇಳುವವರಿಲ್ಲ
ಯಾರಿಗೆ ಬೇಕು
ಮದುವೆ ಬಂಧನ ?

ಆಸೆಯಾದಾಗ
ಆಲಿಂಗನ..
ಜೊತೆ ಸಿಕ್ಕಾಗ
ಚುಂಬನ.....

ಬಯಕೆಯಾದಾಗ ಬೆಸುಗೆ
ಬೇಕೆಂದಾಗಲೆಲ್ಲಾ ಹಾಸಿಗೆ
ಹೀಗಾದರೆ ಹೇಗೆ....?
ದಯವಿಟ್ಟು ಹಾರಿಸಬೇಡಿ ಕಾಗೆ...!
* * * * *

ಬೇಕಿರುವುದು
ಆಯ್ಕೆಯಲ್ಲ,
ಪರಸ್ಪರ
ಹೊಂದಾಣಿಕೆ...

ಬೇಕಿರುವುದು
ಸ್ವೇಚ್ಚಾಚಾರವಲ್ಲ,
ಪರಸ್ಪರ ಗೌರವಾದರ
ಕೊಡುಕೊಳ್ಳುವಿಕೆ...

ಗಂಡು ಹೆಣ್ಣಿನ ನಡುವೆ
ಬೇಕಿರುವುದು
ಪರಸ್ಪರ ನಿಷ್ಟೆ,
ಬದ್ಧತೆ ಮತ್ತು ನಂಬಿಕೆ.....!!!!!

-ಶಶಿಕಾಂತ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ