ಶುಕ್ರವಾರ, ಮೇ 22, 2015

ಸಖಿ ಗೀತೆ....139

ಸಖಿ....

ನಿನ್ನ ಪ್ರೀತಿಯ
ಮೇಲಾಣೆ
ನೀನೆ ನನ್ನೆಲ್ಲಾ
ಕವನಗಳ
ಪ್ರೇರಣೆ....!

ಆದರ್ಶ ಪ್ರೇಮಿಗಳ
ಹಾಗೆ ಮೊಗೆಮೊಗೆದು
ಕೊಟ್ಟಿದ್ದರೆ...
ಪ್ರೀತಿ ಪ್ರೇಮ ಮಮತೆ
ಹುಟ್ಟುತ್ತಲೇ ಇರಲಿಲ್ಲ
ನನ್ನಲ್ಲಿ ಒಂದೂ ಕವಿತೆ...!!

ವಿರಸ ವಿರಹ
ನಿರೀಕ್ಷೆ ನಿರಾಸೆ
ನೋವು ಹತಾಷೆ
ನೀಗಿಕೊಂಡ ಭಾಷೆ..
ನಮ್ಮಿಬ್ಬರ ಸಾಂಗತ್ಯಕ್ಕೆ
ನೀ ಕೊಟ್ಟ ಕಾಣಿಕೆ.........!!!

ನಿನ್ನೀ ಕೊಡುಗೆ
ಪದಪದದಲ್ಲೂ ಪಲ್ಲವಿಸಿ...
ಧಮನಿ ಧಮನಿಗಳಲಿ
ಪ್ರತಿದ್ವನಿಸಿ
ಹರಿದು ಬಂದಳು
ಕಾವ್ಯ ಕನ್ನಿಕೆ.......!!!!

- ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ