ಶುಕ್ರವಾರ, ಮೇ 22, 2015

ಸಖಿ ಗೀತೆ.... 138

ಸಖಿ....

ಸಾಯಬಾರದಿತ್ತು
ಡಿ.ಕೆ.ರವಿ
ಸತ್ತುಹೋದ
ಕೊಡದೇ ನಿರ್ದಿಷ್ಟ
ಕಾರಣ....!

ಸಾವಿನ
ಸೂತಕದ
ಮನೆಯಲ್ಲೂ
ಶುರುವಾಯ್ತು
ದರಿದ್ರ ರಾಜಕಾರಣ ...!!
* * * * *

ಟಿವಿಯವರು ಬಂದರು
ಸತ್ತವನ ಹೆಸರು ಎಳೆತಂದು
ಕಂತುಕಂತುಗಳಲಿ ಕೊಂದರು

ಸಕಲೆಂಟು ಪಕ್ಷದವರು
ಆರೋಪ ಪ್ರತ್ಯಾರೋಪದಲಿ
ನೀಗಿಕೊಂಡವನ ಮತ್ತೆ ಕೊಂದರು...

ಸ್ವಜಾತಿಯವರೂ ಬಂದರು
ಉಗ್ರಹೋರಾಟ ಎಂದರು
ಸತ್ತವನ ಸುತ್ತ ಹುತ್ತ ಬಡಿದರು.

ತನಿಖೆ ತನಿಖೆ ಎಂದರು
ಗೊತ್ತಾದರೂ ಸಾವಿನ ಕಾರಣ..
ಸಮೂಹ ಸನ್ನಿಪೀಡಿತ ಜನ
ಬೀದಿಗಿಳಿದರು ಅಕಾರಣ....
* * * * *

ಪ್ರಕ್ಷುಬ್ಧತೆ ಪ್ರಸರಿಸಿ
ಗಹಗಹಿಸಿತು
ರಾಜಕಾರಣ...!

ಗೋರಿಯಲ್ಲಿ ತಳಮಳಿಸಿತು
ಡಿ.ಕೆ.ರವಿಯ
ಅತೃಪ್ತ ಹೆಣ....!!!

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ