ಶುಕ್ರವಾರ, ಮೇ 22, 2015

ಸಖಿ ಗೀತೆ.... 137

ಸಖಿ....

ಇರಲೇಬೇಕು
ಪ್ರೀತಿಗೊಂದಿಷ್ಟು
ಇತಿ ಮಿತಿ.

ಅತಿಯಾದರೆ
ಡಿ.ಕೆ.ರವಿಯ
ಅಕಾಲಿಕ ಅಂತ್ಯವೇ ಗತಿ.
* * * * *

ಪ್ರೀತಿ ಅನ್ನೋದೆ
ಒಂತರಾ ಮಾಯೆ.
ಸನ್ನಿವೇಶಕ್ಕೆ ತಕ್ಕಂತೆ
ಬದಲಾಗುವ ಛಾಯೆ.

ನೆರಳ ಧ್ಯಾನಿಸಿ
ಮಾಯೆಯ ಮೋಹಿಸಿ
ನಿರಂತರ ಪ್ರೀತಿ
ಪಡೆದವರುಂಟೆ ?
* * * * *

ಪ್ರೀತಿಸಲು ಇಲ್ಲ
ಇಲ್ಲಿ ಅಭ್ಯಂತರ..
ಆದರೂ ಇರಲಿ
ಒಂಚೂರು ಅಂತರ...
ಅತಿಯಾದಷ್ಟು ಅಪಾಯ
ನಿರಂತರ.....!!!

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ