ಶುಕ್ರವಾರ, ಮೇ 22, 2015

ಸಖಿ ಗೀತೆ.... 136

ಸಖಿ...

ಕೊಲ್ಲುವವರ ನಡುವೆ
ಕಾಯುವವರ ಹುಡುಕು.
ವಂಚಕರ ನಡುವೆ
ಸ್ನೇಹಿತರ ಹುಡುಕು...

ಕಾಮಿಸುವವರ ನಡುವೆ
ಪ್ರೇಮಿಸುವವರ ಹುಡುಕು.
ಧನಪಿಶಾಚಿಗಳ ನಡುವೆ
ದಾನಿಗಳ ಹುಡುಕು...

ಕಾಯುವವರು ಕೊಲೆಗಾರರಾದರೆ
ಸ್ನೇಹಿತರು ವಂಚಕರಾದರೆ
ಪ್ರೇಮಿಗಳೇ ಕಾಮಾಂಧರಾದರೆ
ದಾನಿಗಳು ದಾನವರಾದರೆ...

ದೇಶಕ್ಕೆ ದೇಶ
ಅವನತಿಯತ್ತ ಸಾಗಿದೆ
ಮಾನವೀಯತೆ ಮರೆಯಾಗಿ
ಅರಾಜಕತೆ ಕಾದಿದೆ.

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ