ಗುರುವಾರ, ಮೇ 21, 2015

ಸಖಿ ಗೀತೆ....129

ಸಖೀ...

ತೋಳವೊಂದು ಹೊಂಚು ಹಾಕಿ
ಮುದ್ದಿನ ಮರಿಯ ಹೊತ್ತೊಯ್ಯಿತು

ನರಿಯೊಂದು ನಯಗಾರಿಕೆ ತೋರಿ
ಕರುಳ ಕುಡಿಯ ಕತ್ತರಿಸಿತು...

ಹಾವೊಂದು ದ್ವೇಷ ತಾಳಿ
ಮನೆಯ ಬೆಳಕ ನಂದಿಸಿತು..

ಗಿಡುಗವೊಂದು ಮರುಳು ಮಾಡಿ
ಮರಿಯ ಮಾಯ ಮಾಡಿತು...

ಶಕುನಿಯೊಂದು ದಾಳ ಹಾಕಿ
ಕಂದನ ದಾರಿ ತಪ್ಪಿಸಿತು.

ಪಾಪ ಅಪ್ಪ ರೋಧಿಸುತಿಹನು
ಹೋದ ಕೂಸು ಮರಳಲಿಲ್ಲ

ಮತ್ತೆ ಬರುವಳೆಂದು ಕಾಯುತಿಹನು
ಕಟುಕರಿಗೆ ಕರುಣೆಯಿಲ್ಲ....

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ