ಗುರುವಾರ, ಮೇ 21, 2015

ಸಖಿ ಗೀತೆ....109

ಸಖಿ.....

ದಾಸ ನಾನು
ದೇವಿ ನೀನು
ಕಾಣಿಕೆ ನಾನೇನು ಕೊಡಲೇ

ಶಬ್ದಗಳ ಮಣಿ
ಕವಿತೆಯಲ್ಲಿಟ್ಟು
ಪೋಣಿಸಿ ಕೊಡಲೇ,

ಹೃದಯವ 
ಹೂವಲಿಟ್ಟು
ನ್ಯೆವೇದ್ಯ ಮಾಡಲೇ.

ಇರುವುದೆಲ್ಲವ ಬಿಟ್ಟು
ನಿನ್ನ ಜೊತೆಗೆ
ಓಡಿಬರಲೆ,

ನೆತ್ತರಲ್ಲಿ 
ರಂಗವಲ್ಲಿ
ಚಿತ್ತಾರ ಬಿಡಿಸಲೇ.

ಈ ಪ್ರಾಣ ಬಿಟ್ಟು
ಬೆರೇನೇ ಕೇಳು
ಕೊಡುವೆನು ಬಾಲೆ,

ದಾಸ ನಾನು
ದೇವಿ ನೀನು
ಕಾಣಿಕೆ ಏನು ಕೊಡಲೇ....

ಎಂದೆಷ್ಟೇ ಈಪರಿ
ಕೇಳಿದರು ಈ 
ಮೌನ ಯಾಕಲೇ...

ಆದೆಷ್ಟೇ ಹರಿಸಿದರೂ 
ಕಣ್ಣಿರ ಹೊಳೆ
ಕಲ್ಲು ಕರಗದೇ...

ಕ್ಯೆಗೆಟುಕದ ದ್ರಾಕ್ಷಿ
ಹುಳಿಯೆಂದು
ಹೊರಟು ಹೋಗಲೇ ?

ಇಂದಲ್ಲಾ ನಾಳೆ 
ಕರಗೀತು ಕತ್ತಲೆಂದು
ಕಾಯುತಿರಲೇ !

ಇರಲಿ ದಯೆ
ಇದೆಂತಾ ಮಾಯೆ
ಬದುಕಲೇ ಇಲ್ಲಾ ಸಾಯಲೇ ?

-ಯಡಹಳ್ಳಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ