ಸಖಿ...
ಎಂತಹ ವಿಸ್ಮಯ
ಸಾಧಾರಣ ಶಿಲೆಯಿಂದ
ಸುಂದರವಾದ ಕಲೆ
ಅದು ಹೇಗೆ ಅರಳಿಸುತ್ತಾನೆ ಶಿಲ್ಪಿ?
ಸಾಧಾರಣ ಶಿಲೆಯಿಂದ
ಸುಂದರವಾದ ಕಲೆ
ಅದು ಹೇಗೆ ಅರಳಿಸುತ್ತಾನೆ ಶಿಲ್ಪಿ?
ಸತ್ಯವೇನೆಂದರೆ...
ಸೌಂದರ್ಯ ಮುಚ್ಚಿಟ್ಟುಕೊಂಡಿದೆ ಶಿಲೆ
ಹೆಚ್ಚುವರಿ ಓರೆಕೋರೆಗಳ
ಶಿಲ್ಪಿ ತೆಗೆದೊಗೆದರೆ
ಅರಳುವುದು ಕಲೆ...
ಸೌಂದರ್ಯ ಮುಚ್ಚಿಟ್ಟುಕೊಂಡಿದೆ ಶಿಲೆ
ಹೆಚ್ಚುವರಿ ಓರೆಕೋರೆಗಳ
ಶಿಲ್ಪಿ ತೆಗೆದೊಗೆದರೆ
ಅರಳುವುದು ಕಲೆ...
ಹಾಗೆಯೇ
ಪ್ರತಿಭೆ
ಎಲ್ಲರೊಳಗಿರುವಂತಹುದು
ಗುರುವೊಬ್ಬ ಗುರುತಿಸಿ
ಓರೆಕೋರೆ ತಿದ್ದಿದರೆ
ಅರಳುವುದು ಕಲೆ
ಸಿಗುವುದು ಬಾಳಿಗೆ ಬೆಲೆ....!!
ಎಲ್ಲರೊಳಗಿರುವಂತಹುದು
ಗುರುವೊಬ್ಬ ಗುರುತಿಸಿ
ಓರೆಕೋರೆ ತಿದ್ದಿದರೆ
ಅರಳುವುದು ಕಲೆ
ಸಿಗುವುದು ಬಾಳಿಗೆ ಬೆಲೆ....!!
-ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ