ಬುಧವಾರ, ಮೇ 20, 2015

ಸಖಿ ಗೀತೆ....101

ಸಖಿ.....

ಯಾರೆಂದವರು
ದಿಲ್ಲಿಯಲಿ ಮೋದಿ
ಮೋಡಿ ನಡೀಲಿಲ್ಲಂತ.

ಏನೇ ಹೇಳಿ
ದಿಲ್ಲಿ ಜನರು 
ಆಜ್ಞಾಪಾಲಕರು.
ಮೋದಿ ಹೇಳಿದ್ದನ್ನ
ಶಿರಸಾವಹಿಸಿ
ಪರಿಪಾಲಿಸಿದರು.

'ಕಳೆ ಕೊಳೆ ಗೂಡಿಸಿ
ಭಾರತ ಸ್ವಚ್ಚಗೊಳಿಸಿ'
ಮೋದಿ ಕರೆಕೊಟ್ಟರು.

ರಾಜಧಾನಿಯವರು
ಆಪ್ ಪೊರಕೆ ಹಿಡಿದು
ಕೋಮು ಕಳೆ ಬಿಜೆಪಿಯ
ಗೂಡಿಸಿ ದೆಲ್ಲಿ ಸ್ವಚ್ಚಗೊಳಿಸಿದರು.

ಯಾರು ಏನೆ ಹೇಳಿ
ದಿಲ್ಲಿ ಜನರು
ಮೋದಿ ಆಜ್ಙಾಪಾಲಕರು.

-ಯಡಹಳ್ಳಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ