ಮಂಗಳವಾರ, ಮೇ 19, 2015

ಸಖಿ ಗೀತೆ......100

ಸಖಿ....

ನನಗೂ ನಿನಗೂ
ಸರಿಹೋಗುವುದಿಲ್ಲ
ದಾರಿ ಬಿಡು...

ನಮ್ಮಿಬ್ಬರ ಲೋಕ
ಇಬ್ಬಾಗವಾಗಿದೆ
ಬಿಡುಗಡೆ ಕೊಡು....

ನೀನೊಂದು ತೀರ
ನಾನೊಂದು ತೀರ
ನಡುವೆ ಬದುಕು ಬಲು ಭಾರ.....

ಬಿರುಕು ಬಿಟ್ಟಿದೆ ಮನೆ
ಛಿದ್ರಗೊಂಡಿದೆ ಮನ
ಇರಲಿ ಅಂತರ....

ತಂತಿ ಹರಿದಿದೆ
ವೀಣೆ ಮುರಿದಿದೆ
ಅಪಸ್ವರ ಗಾಯನ......

ಸಾಮರಸ್ಯವಿಲ್ಲದ 
ಸಹಜೀವನವೊಂದು
ಸಹಗಮನ.....!!!!!

-ಯಡಹಳ್ಳಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ