ಸೋಮವಾರ, ಮೇ 18, 2015

ಆದದ್ದೆಲ್ಲಾ ಒಳಿತೆ ಆಯಿತು :

ಆದದ್ದೆಲ್ಲಾ ಒಳಿತೆ ಆಯಿತು :

ಶೂದ್ರನಾಗಿ ಹುಟ್ಟಿದ್ದು ಒಳ್ಳೆಯದೇ ಆಯ್ತು
ಇಲ್ಲಾಂದ್ರೆ....
ವರ್ಣಮಂತ್ರ ಪಠಿಸುವ ಹರಾಮಿ ಹಾರವರ ಕುತಂತ್ರ
ಈ ಶತಮಾನಗಳ ಶೋಷಣೆಯ ದಾವಂತ
ನನಗೆಲ್ಲಿ ಅರಿವಾಗುತ್ತಿತ್ತು.....!


ಪಂಚಮನಾಗಿ ಜನಿಸಿದ್ದು ಒಳಿತೇ ಆಯಿತು
ಇಲ್ಲಾಂದ್ರೆ....
ಈ ನಿತ್ಯ ನೋವು, ನಿರಂತರ ಅವಮಾನ
ಸ್ವಾತಂತ್ರ್ಯ ಸ್ವಾಭಿಮಾನರಹಿತ ಬದುಕಿನ ನಿರ್ವಾಣ
ನನ್ನ ಅನುಭವಕ್ಕೆಲ್ಲಿ ದಕ್ಕುತ್ತಿತ್ತು......!!

ಅಂತ್ಯಜನಾಗಿ ಹುಟ್ಟಿದ್ದು ಸರಿ ಹೋಯಿತು.
ಇಲ್ಲವಾದರೆ...
ದಲಿತರ ಹೆಸರಲ್ಲಿ ನಿತ್ಯ ನಡೆಯುವ ರಾಕ್ಷಸ ರಾಜಕಾರಣದ ಸಂಚು
ದಲಿತ ಸಂಘ ಮಾಡಿ ಆಶಾಭಂಗ ಮಾಡಿದ ದಲ್ಲಾಳಿಗಳ ಒಳಸಂಚು
ನನಗೆಲ್ಲಿ ತಿಳಿಯುತ್ತಿತ್ತು........!!!

ಬಡವನಾಗಿ ಹುಟ್ಟಿದ್ದು ಉತ್ತಮವಾಯಿತು
ಇಲ್ಲದಿದ್ದರೆ...
ಹಸಿವಿನ ಆಹಾಕಾರ, ಕಳಪೆ ಅಕ್ಕಿ ಕೊಟ್ಟು ಸರಕಾರ ಮಾಡುವ ಉಪಕಾರ
ಖಾಕಿ ಖಾದಿ ಖಾವಿ ಕರಿಕೋಟುಗಳ ದುರಹಂಕಾರ
ನನಗೆ ಹೇಗೆ ಗೊತ್ತಾಗುತ್ತಿತ್ತು......

ಅಸಮಾನ ವ್ಯವಸ್ಥೆಯ ಫಲಾನುಭವಿಯಾಗಿ ಹುಟ್ಟಲೇಬಾರದಿತ್ತು
ಹುಟ್ಟಿದ ಮೇಲೆ ಶೋಷಣೆ ಅನ್ಯಾಯ ಸಹಿಸಿಕೊಳ್ಳಬಾರದಿತ್ತು.
ಸಹಿಸಿದ್ದು ಸಾಕು ಶತಮಾನದ ಸಿಟ್ಟು ಸ್ಪೋಟಗೊಳ್ಳಲೇ ಬೇಕು.
ಲಾವಾರಸ ಒಳಗೊಳಗೆ ಕುದಿಯುತ್ತಿದೆ, ಜ್ವಾಲಾಮುಖಿಯಾಗಲು ಕಾಯುತ್ತಿದೆ......!!

- ಶಶಿಕಾಂತ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ