ಸೋಮವಾರ, ಮೇ 18, 2015

ಗೋರಿ


ಗೋರಿ :

ಎಲ್ಲಿದ್ದರೇನಂತೆ
ಹೇಗಿದ್ದರೇನಂತೆ
ಕೊನೆಗೆಲ್ಲರೂ ಹೋಗಿ
ಸೇರುವ ಜಾಗ ಗೋರಿಯಂತೆ......!


ನಾನೂ ನನದೆಂದು ಹಲಬುವ,
ಎಲ್ಲ ತನಗೆ ಇರಲೆಂದು ಬಯಸುವ
ಎಲ್ಲರೂ ಮನಸ್ಸಿಟ್ಟು ಕೇಳಿ
ಗೋರಿ ಸೇರುವ ಮೊದಲು ಮನುಷ್ಯರಾಗಿ......!!

ವೇದಾಂತವಲ್ಲವಿದು
ಭ್ರಾಂತಿಯಲ್ಲಿರುವವರ
ಎಚ್ಚರಿಸುವ ಕಾಲನ ಡಿಂಡಿಮ
ಸಾಯುವ ಮೊದಲು ಸಹೃದಯರಾಗಿ......!!!

ಏನಾಗದಿದ್ದರೇನಂತೆ ಬದುಕೋಣ
ಅನ್ಯರಿಗೆ ಹೊರೆಯಾಗದಂತೆ.
ಅಲೆಗ್ಜಾಂಡರ್ ಬರಿಗೈಚಾಚಿ ಸೇರಿದ ಗೋರಿ
ಗೋರಿಯೇ ಮನುಜನ ಕೊಟ್ಟಕೊನೆಯ ಗುರಿ......!!!!


-ಶಶಿಕಾಂತ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ