ಮಂಗಳವಾರ, ಜೂನ್ 9, 2015

ಸಖಿ ಗೀತೆ.......296

ಸಖಿ...

ಆತುರಕ್ಕೆ
ಆಯಸ್ಸು ಕಡಿಮೆ..
ಅಲ್ಪಾಯುನಲ್ಲೇ ಅನಾಹುತದ
ಪರಿಣಾಮ ವಿಪರೀತ
ಎಲ್ಲಾ ಅನುಮಾನದ ಮಹಿಮೆ...

ಮನಸುಗಳ ನಡುವೆ
ಗೋಡೆಗಳ, ಮನುಷ್ಯರ
ಮದ್ಯೆ ಹಗೆತನಗಳ
ಹುಟ್ಟಿಸಿ ಹಾಳುಮಾಡುತ್ತವೆ
ಸಂದೇಹಗಳು...

ಶಂಕೆಗಳು ಅಂಕೆ ಮೀರಿ
ಮಾನವೀಯತೆಗೆ
ಮಹಾ ಸೋಲು...
ಅಹಲ್ಯೆ ಕಲ್ಲಾದರೆ
ಸೀತೆ ಕಾಡುಪಾಲು...

ಯಾರಿಗಿದೆ ಇಲ್ಲಿ
ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ
ನೋಡುವ ವ್ಯವಧಾನ...
ಅನುಮಾನದ ರೋಗಕ್ಕೆ ಸದಾ
ಸಂಬಂಧಗಳ ಬಲಿದಾನ....

ತಪ್ಪೋ ಸರಿಯೋ
ಎಲ್ಲರೂ ಸನ್ನಿವೇಶದ
ಕೂಸುಗಳು...ಇರಲಿ
ಒಂದಿಷ್ಟು ಸಹನೆ
ಇನ್ನೊಂದಿಷ್ಟು ಕರುಣೆ....!!

- ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ