ಮಂಗಳವಾರ, ಜೂನ್ 9, 2015

ಸಖಿ ಗೀತೆ......286

ಸಖಿ...

ಸಹನೆ ಇಲ್ಲದ
ಸಂಕುಚುತ
ಮನಸುಗಳಿಗೆಲ್ಲಿದೆ
ವಿವೇಚನೆ....?

ವದಂತಿಗಳ
ದಿಟವೆಂದು ನಂಬಿ ನರಕ
ಸೃಷ್ಟಿಸುವವರೊಂದಿಗೆಲ್ಲಿ
ಸಮಾಲೋಚನೆ.....?

ಇದ್ದರೂ ಪರವಾಗಿಲ್ಲ
ನಿತ್ಯ ಉಪವಾಸ...
ಉಪದ್ರದ ಜೊತೆ
ಇದೆಂತಾ ಸಹವಾಸ....?

ಸದಾ ಕಿರಿಕಿರಿಯ
ಕಿಂಕರರೊಂದಿಗೆಂಥಾ
ಸ್ನೇಹ ಸಮ್ಮಿಲನ...?

ಈ ಆರೋಪ ವ್ಯರ್ಥಾಲಾಪ
ಮಾಡುವ ಮಹಾಮಹಿಮರಿಗೆ
ದೂರದಿಂದಲೇ ಹೇಳುವೆ ನಮನ....!!

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ