ಮಂಗಳವಾರ, ಜೂನ್ 9, 2015

ಸಖಿ ಗೀತೆ......273

ಸಖಿ...

ಏನನ್ನೂ
ಪ್ರಶ್ನಿಸಬೇಡ
ಮತಾಂಧತೆಯ 
ಬಿರುಗಾಳಿ
ಜೋರಾಗಿದೆ....

ಆಕ್ಷೇಪಿಸಿದರೆ
ಆಕ್ರಮಿಸಿಕೊಳ್ಳುವ
ಸಕ್ರಮಗೊಂಡ
ಸನಾತನ
ಧರ್ಮಗಳಿವೆ....

ಶ್ರೇಷ್ಠತೆಯ
ವ್ಯಸನ ಪೀಡಿತ
ಮೌಡ್ಯಮೋಹಿಗಳು
ಸ್ವಧರ್ಮಕ್ಕಾಗಿ ಸಾಯಲು
ಸಾಯಿಸಲು ಸಿದ್ದವಾಗಿವೆ...

ವಿನಾಶದಲಿ
ವಿಕಾಸ ಹುಡುಕುವ
ಧರ್ಮಾಂಧ ಪಡೆ
ಧರ್ಮಸಂಸ್ಥಾಪನೆಗೆ
ಬದ್ಧವಾಗಿವೆ...

ಮನುಷ್ಯ ಅಳಿದರೂ
ಧರ್ಮ ಉಳಿಯಬೇಕಂತೆ.....
ಮನುಕುಲದ ಗೋರಿಯ ಮೇಲೆ
ದೇವರ ಸಾಮ್ರಾಜ್ಯ
ಸಂಸ್ಥಾಪಿಸಬೇಕಂತೆ......

ಅದಕ್ಕೇ ಹೇಳಿದ್ದು 
ಮೇನಿಯಾ ಪೀಡಿತರನ್ನು ಪ್ರಶ್ನಿಸುವುದು...
ಬೌದ್ದಿಕ ದಿವಾಳಿಕೋರರ
ಜಗದಲ್ಲಿ ಬುದ್ದನಾಗುವುದು
ಮಹಾ ಅಪಾಯಕಾರಿ.....!!!

-ಶಶಿ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ