ಮಂಗಳವಾರ, ಜೂನ್ 9, 2015

ಸಖಿ ಗೀತೆ.......260

ಸಖಿ..

ಇಲ್ಲಿ ಏನೂ
ತಾನೆ ತಾನಾಗಿ
ಬದಲಾಗಲಾರದು...
ಬದಲಾಯಿಸಲು
ಕನಿಷ್ಠ ಪ್ರಯತ್ನ
ಮಾಡಲೇಬೇಕು......!

ಯಾರ ಅನುಮತಿ
ಅಗತ್ಯವಿಲ್ಲದೇ
ಬದಲಾಗುವುದು
ಕಾಲ ಮಾತ್ರ....

ಕಾಲವನ್ನೂ
ಅಗತ್ಯಕ್ಕೆ ತಕ್ಕಂತೆ
ಬಳಸಿಕೊಳ್ಳಲು
ಇಚ್ಚಾಶಕ್ತಿ ಮತ್ತು
ಆಸಕ್ತಿ ಬೇಕು.....!!

ವೇದನೆಗೆ ಒಂದೆ ದಾರಿ
ಸಂವೇದನೆಗೆ ಹಲವು...
ಪ್ರಯತ್ನಿಸಿದರೆ ಅನೇಕ ಬಾರಿ
ಸಾಧನೆಗೆ ಗೆಲುವು...

-ಶಶಿ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ