ಮಂಗಳವಾರ, ಜೂನ್ 9, 2015

ಸಖಿ ಗೀತೆ......284

ಸಖಿ...

ಮನುಜಗೆ ಸಾಮರ್ಥ್ಯ
ಎಷ್ಟಿದ್ದರೇನು..?
ಸಂಕಲ್ಪ ಇಲ್ಲದೆ ಗುರಿ
ಸಾಧಿಸಲಾಗುವುದೇನು...?

ಪಂಪಿನ ತಾಕತ್ತು
ಅದೆಷ್ಟಿದ್ದರೇನು...
ವಿದ್ಯುತ್ ಇಲ್ಲದೇ
ನೀರೆತ್ತುವುದೇನು?

ವ್ಯಕ್ತಿಗೆ ಶಕ್ತಿ
ಎಂತಿದ್ದರೇನು..
ಗುರಿಮುಟ್ಟುವ ಆಸಕ್ತಿ
ಬೇಕಿಲ್ಲವೇನು....?

ಹಡಗಿನ ಗಾತ್ರ
ಹಿರಿದಾದರೇನು...
ದಿಕ್ಸೂಚಿ ಇಲ್ಲದೇ
ದಡ ತಲುಪುವುದೇನು...?

ಸಾಧನೆಗೆ ಬೇಕು
ಚಲನಶೀಲ ಗುರಿ .....
ಸಂಕಲ್ಪ ಇದ್ದರೆ
ಹುಡುಕಬಹುದು ದಾರಿ...!!

-ಶಶಿ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ