ಮಂಗಳವಾರ, ಜೂನ್ 9, 2015

ಸಖೀ ಗೀತೆ......285

ಸಖಿ....

ಚಿಕ್ಕವನಿದ್ದಾಗ
ದಿನನಿತ್ಯ ಅವ್ವ
ಹೇಳುತ್ತಿದ್ದಳು.....
"ಒಳ್ಳೆಯವರ
ಗೆಳೆತನವಿರಲಿ
ಕೆಟ್ಟ ಜನರು
ದೂರವಿರಲಿ"...

ಕೇಳುವಷ್ಟು ಕೇಳಿ
ಪ್ರಶ್ನಿಸಿದೆ ಮರಳಿ
"ಅವ್ವಾ... ಒಳ್ಳೆಯವರಲ್ಲೂ
ಕೆಟ್ಟಗುಣಗಳಿವೆ...
ಕೆಟ್ಟವರಲ್ಲೂ
ಒಳ್ಳೆಯತನವಿದೆಯಲ್ಲವಾ....?

ಬರಲಿಲ್ಲ ಉತ್ತರ
ಅವ್ವ ನಿರುತ್ತರ.....

ಸರಿಯೋ ತಪ್ಪೋ ಗೊತ್ತಿಲ್ಲ
ನಾನೀಗ ನನ್ನ ಮಗನಿಗೆ
ಉಪದೇಶಿಸುತ್ತಿದ್ದೇನೆ...
" ಹೆಚ್ಚು ಗೆಳೆಯರನ್ನು ಸಂಪಾದಿಸು
ಒಳ್ಳೆಯವರನ್ನು ಅನುಸರಿಸು
ಕೆಟ್ಟದ್ದನ್ನು ನಿರ್ಲಕ್ಷಿಸು...."

ಕೇಳುವಷ್ಟು ಕೇಳಿ
ಮಗ ಪ್ರಶ್ನಿಸಿದ ಕೆರಳಿ
"ಒಳ್ಳೆಯವರಲ್ಲಿ ಕೆಟ್ಟದ್ದನ್ನು
ಕೆಟ್ಟವರಲ್ಲಿ ಒಳ್ಳೆಯದನ್ನು
ಗುರುತಿಸುವುದು ಹೇಗೆ ತಂದೆ..?"

ನನ್ನಲ್ಲಿರಲಿಲ್ಲ ಉತ್ತರ
ನಾನಾಗ ನಿರುತ್ತರ......!!

-ಶಶಿ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ