ಮಂಗಳವಾರ, ಜೂನ್ 9, 2015

ಸಖಿ ಗೀತೆ.......295

ಸಖಿ...

ಸಾಧಕನ
ಸೌಖ್ಯವನ್ನು
ಹಂಚಿಕೊಳ್ಳಲು 
ಜನರಿಗೇನು ಕಡಿಮೆ
ಸಾವಿರಾರಿದ್ದಾರೆ...!

ವೇದನೆಯ
ಸಮಯದಲ್ಲಿ
ಸಂಯಮದಿಂದ
ಸಾಂತ್ವನ ಹೇಳುವ
ಆತ್ಮೀಯರೆಷ್ಟಿದ್ದಾರೆ...?

ಸಾಧನೆ ಏನು
ಸುಮ್ಮನೆ ಸಿಕ್ಕೀತೆ...?
ಯಶಸ್ಸೇನು
ಶ್ರಮವಿಲ್ಲದೇ ದಕ್ಕೀತೆ...?

ನಿತ್ಯ ವೇದನೆಯ ನೋವು
ತಾಳಿಕೊಂಡಾಗ
ಕೊನೆಗೊಮ್ಮೆ
ದಕ್ಕುವುದು ಸಾಧನೆ....
ಮರೆಸುವುದು
ಸಾವಿರ ವೇದನೆ....

ಆದರೂ ಹಿಂತಿರುಗಿ
ಹುಡುಕಿದರೆ ಎಲ್ಲಿದೆ ಆ
ಕಣ್ಣೀರೊರೆಸಿದ ಹಸ್ತ...
ಕಾಲೆಳೆದ ಕೈಗಳು
ಜೈಕಾರ ಹಾಕುತ್ತಿವೆ
ಇದೆಂತಾ ವಿಚಿತ್ರ....

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ