ಮಂಗಳವಾರ, ಜೂನ್ 9, 2015

ಸಖಿ ಗೀತೆ......275

ಸಖಿ...

ಜೋಕರ್
ಎಂದುಕೊಂಡರೂ
ಪರವಾಗಿಲ್ಲ...

ನೋವುಂಡವರ
ಕಹಿ ಮೊಗದಲ್ಲಿ
ಕ್ಷಣವಾದರೂ
ನಗೆ ಮೂಡಿಸಲು
ಸುಮ್ಮನೆ ಆಗಾಗ
ತಮಾಷೆ ಮಾಡುತ್ತೇನೆ....!

ಹುಚ್ಚ ನಾನೆಂದು
ನೀನಂದುಕೊಂಡರೂ
ಬೇಸರವಿಲ್ಲ....

ನನ್ನೆದೆಯಲ್ಲಿ
ಮಡುಗಟ್ಟಿದ
ನೋವನ್ನು
ಮರೆಯಲು
ಕೆಲವೊಮ್ಮೆ
ನಾನೊಬ್ಬನೇ
ನಗುತ್ತಿರುತ್ತೇನೆ...

ಕ್ಷಣಿಕವಾದರೂ
ನೋವನ್ನು
ನಗೆಯಾಗಿ
ಪರಿವರ್ತಿಸುವ
ಸಂತನಿಗಾಗಿ
ಕಾಯುತ್ತಿದ್ದೇನೆ....!!

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ