ಮಂಗಳವಾರ, ಜೂನ್ 9, 2015

ಸಖಿ ಗೀತೆ......291

ಸಖಿ...

ಪ್ರೀತಿಸೋರೆಲ್ಲಾ
ಮದುವೆ ಅಗ್ತಾರಂತೆನಿಲ್ಲ...
ಮದುವೆ ಆದವರೆಲ್ಲಾ
ಪ್ರೀತಿ ಮಾಡ್ತಾರಂತಿಲ್ಲ...

ನಿಜ ಹೇಳಬೇಕೆಂದರೆ
ಆಕರ್ಷಣೆಯನ್ನೇ ಪ್ರೀತಿ
ಎಂದರಿತ ಮದುವೆಗೆ
ಜಾಸ್ತಿ ಖಾತ್ರಿ ಇಲ್ಲ....

ವಿವಾಹ ಆಗಲೀ ಬಿಡಲಿ
ಕೊನೆವರೆಗೂ ಪ್ರೀತಿ ಇರಲಿ...
ಮದುವೆಯಾದರೂ ಪ್ರೀತಿ
ಎಂದೆಂದೂ ದೂರಾಗದಿರಲಿ...

ಇದ್ದರೆ ಇಂತಾ ಒಲವು
ಬದುಕಲ್ಲಿ ಗ್ಯಾರಂಟಿ ಗೆಲುವು...
ಪ್ರೀತಿಯೊಂದರ ಅಕಾಲಿಕ ಸಾವು
ಕೊನೆವರೆಗೂ ಸಹಿಸದ ನೋವು....

- ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ