ಮಂಗಳವಾರ, ಜೂನ್ 9, 2015

ಸಖಿ ಗೀತೆ.....278

ಸಖಿ....

ನಾವಾಗ
ಕನ್ನಡ ಶಾಲೆಯ
ಕೈಗೂಸುಗಳು...
ಕೈಗಡಿಯಾರ
ಕನಸಿನ ಮಾತು....
ಪಾಠದ ನಂತರವೂ
ಆಟಕ್ಕೆ ಉಳಿಯುತ್ತಿತ್ತು
ಬೇಕಾದಷ್ಟು ಸಮಯ...
ಬಾಲ್ಯವೆನ್ನುವುದು ಎಂಥಾ
ಉಲ್ಲಾಸಮಯ.....!

ಈವಾಗ
ನಮ್ಮ ಮಕ್ಕಳು
ಕಾನ್ಮೆಂಟ್ ಕೂಸುಗಳು...
ದಿನಕ್ಕೊಂದು ಗಡಿಯಾರ
ಮೇಲೆ ಇಂಗ್ಲೀಷಿನ ಬಡಿವಾರ...
ಆಟ ಕನಸಿನ ಮಾತು
ಪಾಠ ಮನೆಪಾಠ
ಟಿವಿ ನೋಟದಲಿ
ಸಾಕಾಗುತ್ತಿಲ್ಲ ಸಮಯ...
ಬಾಲ್ಯವೆಂಬುದಿಲ್ಲಿ
ಅಯೋಮಯ.......!!

-ಶಶಿ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ