ಮಂಗಳವಾರ, ಜೂನ್ 9, 2015

ಸಖಿ ಗೀತೆ.....289

ಸಖಿ...

ಸಕಲ
ಸಂಪತ್ತು
ಸವಲತ್ತುಗಳು
ಅನುಕೂಲಕರವಾಗಿವೆ...

ಆದರೂ...
ಅದೇನೋ ಅತೃಪ್ತಿ
ಅಂತರಂಗದಲ್ಲಿ
ಅಸಮಾಧಾನ ಪ್ರಾಪ್ತಿ...

ಕಥಾಕಥಿತ ಬದುಕು
ಒಂಥರಾ ಸುಸ್ಥಿರ...
ಆದರೆ ಮನದ ತುಂಬಾ
ಅಸ್ಥಿರತೆ ಅಗೋಚರ...

ಅಗತ್ಯಮೀರಿದ ಸವಲತ್ತುಗಳೇ
ಅಸ್ಥಿರತೆಗೆ ಕಾರಣ...
ಗೊತ್ತಿದ್ದೂ ಬಯಸುತ್ತೇವೆ
ಎಲ್ಲವನೂ ವಿನಾಕಾರಣ....

ಶ್ರಮರಹಿತ ಕೆಲಸ
ಭಾವರಹಿತ ಸರಸ
ಅದ್ಯಾಕೋ ಬದುಕು
ಬಹುತೇಕ ನೀರಸ...

ಇರುವುದೆಲ್ಲ ತೊರೆಯಬೇಕು
ಗೌತಮ ಬುದ್ದನ ಹಾಗೆ....
ಎಲ್ಲವನು ಬಿಟ್ಟ ಮೇಲೆ
ಬದುಕುವುದಾದರೂ ಹೇಗೆ...?

ಬಿಟ್ಟೆನೆಂದಷ್ಟು ದಟ್ಟವಾಗುತಿದೆ
ಮನದ ಮುಂದನ ಮಾಯೆ...
ಗಟ್ಟಿ ನಿರ್ಧಾರ ಬುಡಮೇಲಾಗುತಿದೆ
ಎಲ್ಲೆಲ್ಲೂ ದುರಾಸೆಯ ಛಾಯೆ...!

- ಶಶಿ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ