ಮಂಗಳವಾರ, ಜೂನ್ 9, 2015

ಸಖಿ ಗೀತೆ......263

ಸಖಿ...

ಪತಿ ಪತ್ನಿಯನ್ನು
ಹೊಡೆದರೆ ಶೌರ್ಯ....
ಪತ್ನಿ ಪತಿಯನ್ನು
ಹಿಂಸಿಸಿದರದು ಕ್ರೌರ್ಯ...

ಈ ಶೌರ್ಯ ಕ್ರೌರ್ಯಗಳ
ದಾಂಪತ್ಯಾಯಣವೇ
ಮೇಲಾಟದ ಬದುಕು
ಹೊಂದಾಣಿಕೆ ಬೇಕು....

ಬದಲಾಗುತ್ತಿದೆ
ಗಂಡ ಹೆಂಡಿರ
ನಡುವಿನ
ಸಮೀಕರಣದ
ವಿನ್ಯಾಸ...

ಕೌಟುಂಬಿಕ
ನ್ಯಾಯಾಲಯಗಳಲ್ಲಿ
ಹೆಚ್ಚುತ್ತಿವೆ
ವಿಚ್ಚೇದನೆಯ
ಸಹವಾಸ...

ಹೀಗಾದರೆ ಹೇಗೆ
ಸಂಸಾರ ಕಟ್ಟುವ ಬಗೆ,
ಮನಸು -ಮೈ -ಬದುಕು
ಹಂಚಿಕೊಂಡವರಿಗ್ಯಾಕೆ ಈ ಹಗೆ....?

- ಶಶಿ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ