ಮಂಗಳವಾರ, ಜೂನ್ 9, 2015

ಸಖಿ ಗೀತೆ.... 254

ಸಖಿ....

ನೀ ಏನೇ ಹೇಳು....

ಪ್ರೇಮಿಗಳಾಗಿದ್ದಾಗ
ಅದೆಂತಾ ಸೊಗಸಿನ
ಚೆಲ್ಲಾಟ.....!

ಸತಿಪತಿಗಳಾದಾಗ
ಒಬ್ಬರಿನ್ನೊಬ್ಬರು ನಿಯಂತ್ರಿಸುವ
ಮೇಲಾಟ....!!

ವರುಷಗಳುರುಳಿದಂತೆ
ನಗಣ್ಯ ವಿಷಯಗಳಿಗೂ
ಕದಾಟ...!!!

ಬದುಕಿನ ಆಟದ
ಪೈಪೋಟಿಯಲ್ಲಿ
ಸೋಲುವವರಾರು
ಗೆಲ್ಲುವವರಾರು
ಗೆದ್ದು ಸೊತವರಾರು
ಸೋತು ಗೆದ್ದವರಾರು...?

ಒಟ್ಟಿನ ಮೇಲೆ
ಹೇಗೋ ಕಾಲ ಸಾಗುತ್ತಿದೆ
ನೆಮ್ಮದಿ ಸಾಯುತ್ತಿದೆ...

ಇದ್ದರಿರಲಿ ಬಿಡಿ
ಸಂಸಾರದಿ ಅಂತರ
ಆಟ ನಡೆಯುತಿರಲಿ ನಿರಂತರ.......!!!!

- ಶಶಿ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ