ಮಂಗಳವಾರ, ಜೂನ್ 9, 2015

ಸಖಿ ಗೀತೆ......283

ಸಖಿ....

ಸಂದೇಹಗಳು
ಕೋಗಿಲೆಗಳಂತೆ
ಮನುಜನ ಮನದ 
ಹೆಮ್ಮರದಲ್ಲಿ
ಗೂಡುಕಟ್ಟಿ
ಕಾಲಕಾಲಕ್ಕೆ
ಮೊಟ್ಟೆಇಟ್ಟು
ಹಾರಿಹೋಗುತ್ತವೆ...!

ನಾವದಕ್ಕೆ ಕಾವು
ಕೊಟ್ಟು ಪ್ರತಿದಿನ
ಮರಿ ಮಾಡುತ್ತೇವೆ,
ಅನುಮಾನ ದೂರಾಗಿ
ಮರಿ ನಮ್ಮದಲ್ಲ
ಎಂದರಿವಾಗುವುದರೊಳಗೆ
ಶ್ರಮ ಸಮಯ ನೆಮ್ಮದಿ
ಹಾಳು ಇದೆಂತಾ ಬಾಳು...!!

ಮತ್ತೆ ಮತ್ತೆ ನಾವಿಲ್ಲದಾಗ
ಮನದ ಗೂಡಲ್ಲಿ ಹುಟ್ಟುವ
ಅನುಮಾನದ ಮೊಟ್ಟೆಗಳು
ಬಣ್ಣದ ಚಿಟ್ಟೆಗಳಾಗಿ
ಮನದುಂಬುವ ಪರಿ..
ಕಾಲಕಾಲಕ್ಕೆ
ಮೊಟ್ಟೆಯಾಗುವುದು ಮರಿ...
ಯಾವುದದು
ಪರಿಹರಿಸಿಕೊಳ್ಳುವ ದಾರಿ....?

-ಶಶಿ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ