ಮಂಗಳವಾರ, ಜೂನ್ 9, 2015

ಸಖಿ ಗೀತೆ......262

ಸಖಿ...

ಬದುಕಿನ
ಸರಿ ಬೆಸ
ಆಟದಲ್ಲಿ....

ನೀ ಗೆದ್ದಾಗೆಲ್ಲಾ ನನ್ನ
ಅಪ್ರಯೋಜಕನೆಂದು
ತಿಳಿದುಕೊಂಡೆ..

ನೀ ಸೋತಾಗೆಲ್ಲಾ
ಮೋಸದಾಟವೆಂದು
ಆರೋಪಿಸಿಕೊಂಡೆ...

ಸೋಲು ಗೆಲವುಗಳನು
ಸಮನಾಗಿ ಸ್ವೀಕರಿಸಿದ್ದರಿಂದು
ಜೊತೆಯಾಗಿರಬಹುದಿತ್ತು...!

ಸಮಬಾಳು ಸಮಪಾಲು
ಹಂಚಿಕೊಂಡಿದ್ದರಿಂದು
ಸುಖವಾಗಿ ಬಾಳಬಹುದಾಗಿತ್ತು.....!!

ಸರಿ ಬೆಸ ಆಟದಲಿ
ಸರಿಯೆಲ್ಲಾ ಬೆಸವಾಯ್ತು
ಬೆಸವೆಲ್ಲಾ ಬೇಸರವಾಯ್ತು
ಬೇಸರಗಳೆಲ್ಲಾ ಕವಿತೆಯಾಯ್ತು......!!!

- ಶಶಿ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ