ಮಂಗಳವಾರ, ಜೂನ್ 9, 2015

ಸಖಿ ಗೀತೆ.....268

ಸಖಿ...

ನಿರ್ಧಯಿಗಳ
ಮೇಲೊಂದಿಷ್ಟು
ದಯೆ ತೋರು
ಅವರಿಗದರ
ಅಗತ್ಯವಿದೆ....

ಅಮಾನವೀಯರ
ಮೇಲಿನ್ನೊಂದಿಷ್ಟು
ಮಾನವೀಯತೆ ಇರಲಿ
ಅಂತವರಿಗದು
ಬೇಕಾಗಿದೆ....

ಸಹಜೀವಿಗಳಿಗೆ
ಹಂಚುವ ಮುನ್ನ
ದಯೆ ಮಾನವೀಯತೆ
ಮೊಟ್ಟಮೊದಲು
ನಿನ್ನಲ್ಲಿರಲಿ...

- ಶಶಿ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ