ಸಖಿ...
ಅಸೂಯೆ ಕಿಡಿಊದಿ
ದ್ವೇಷದ ಕಿಚ್ಚು ಹೆಚ್ಚಿಸಿ
ಸಂಬಂಧ ಧಗಧಗಿಸುವಾಗ
ತಣ್ಣಗೆ ಹೇಳುತ್ತಿರುವೆ
'ನೀನಿಲ್ಲದೆ ನಾ
ಹುಚ್ಚಿಯಾಗುತ್ತೇನೆಂದು.'...!
ದ್ವೇಷದ ಕಿಚ್ಚು ಹೆಚ್ಚಿಸಿ
ಸಂಬಂಧ ಧಗಧಗಿಸುವಾಗ
ತಣ್ಣಗೆ ಹೇಳುತ್ತಿರುವೆ
'ನೀನಿಲ್ಲದೆ ನಾ
ಹುಚ್ಚಿಯಾಗುತ್ತೇನೆಂದು.'...!
ಬಿಟ್ಟು ಬಿಡು
ಕಿವಿಗೆ ಕೆಂದಾವರೆ
ಮುಡಿಸುವ ಯತ್ನ....
ಕಾಲಕ್ಕೆ ತಕ್ಕಂತೆ
ಕಾಗೆ ಹಾರಿಸುವುದು
ವ್ಯರ್ಥ ಪ್ರಯತ್ನ....!!
ಕಿವಿಗೆ ಕೆಂದಾವರೆ
ಮುಡಿಸುವ ಯತ್ನ....
ಕಾಲಕ್ಕೆ ತಕ್ಕಂತೆ
ಕಾಗೆ ಹಾರಿಸುವುದು
ವ್ಯರ್ಥ ಪ್ರಯತ್ನ....!!
ನೆನಪಿರಲಿ
ಪ್ರೀತಿ ಪಾರಿವಾಳದಂತೆ
ಹಾರಿ ಹೊದೀತೆಂದು
ಮುಷ್ಟಿಯಲ್ಲಿಟ್ಟು ಬಚ್ಚಿಟ್ಟರೆ
ಉಸಿರುಗಟ್ಟಿ
ಸತ್ತು ಹೋಗುತ್ತದೆ....
ಪ್ರೀತಿ ಪಾರಿವಾಳದಂತೆ
ಹಾರಿ ಹೊದೀತೆಂದು
ಮುಷ್ಟಿಯಲ್ಲಿಟ್ಟು ಬಚ್ಚಿಟ್ಟರೆ
ಉಸಿರುಗಟ್ಟಿ
ಸತ್ತು ಹೋಗುತ್ತದೆ....
ಚಿತ್ರವಿಚಿತ್ರ
ಕಟ್ಟಳೆಗಳಲಿ
ಬಂಧಿಸಿ
ನಿರ್ಬಂಧಿಸಿದರೆ
ಸಮಯ ಸಾಧಿಸಿ
ಹಾರಿ ಹೋಗುತ್ತದೆ....
ಕಟ್ಟಳೆಗಳಲಿ
ಬಂಧಿಸಿ
ನಿರ್ಬಂಧಿಸಿದರೆ
ಸಮಯ ಸಾಧಿಸಿ
ಹಾರಿ ಹೋಗುತ್ತದೆ....
ಪ್ರೀತಿ ಏನು ಬಿಡು
ಎಲ್ಲರೂ ಮಾಡುತ್ತಾರೆ...
ಒಂದಾದ ಒಲವನ್ನು
ತ್ಯಾಗ ಹೊಂದಾಣಿಕೆಗಳಿಂದ
ಕೊನೆತನಕ ಉಳಿಸಿ
ಬೆಳೆಸುವವರು ಮಾತ್ರ
ನಿಜ ಪ್ರೇಮಿಗಳಾಗುತ್ತಾರೆ......!!!
ಎಲ್ಲರೂ ಮಾಡುತ್ತಾರೆ...
ಒಂದಾದ ಒಲವನ್ನು
ತ್ಯಾಗ ಹೊಂದಾಣಿಕೆಗಳಿಂದ
ಕೊನೆತನಕ ಉಳಿಸಿ
ಬೆಳೆಸುವವರು ಮಾತ್ರ
ನಿಜ ಪ್ರೇಮಿಗಳಾಗುತ್ತಾರೆ......!!!
-ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ