ಮಂಗಳವಾರ, ಜೂನ್ 9, 2015

ಸಖಿ ಗೀತೆ..... 257

ಸಖಿ...

ಮಗು ಓಡುವಾಗ
ಬೀಳುವ ಮೊದಲು
ಕೈಹಿಡಿದು ಕಾಪಾಡಿ
ದೈರ್ಯ ತುಂಬಿ
ಮರಳಿ ಯತ್ನಿಸಲು
ಪ್ರೇರೇಪಿಸುವವನು
ನಿಜವಾದ ತಂದೆ......!

ಮಕ್ಕಳಿರುವುದೇ ತಪ್ಪು
ಮಾಡುವುದಕ್ಕೆಂದರಿತು
ತಪ್ಪುಗಳಿಂದ ಪಾಠಕಲಿತು
ಪುನರಾವರ್ತನೆ ಮಾಡದಿರೆಂದು
ಮಗುವಿನ ಮನ
ಪರಿವರ್ತಿಸುವವನು
ದಿಟವಾದ ತಂದೆ....

ಅತ್ತಾಗ ರಮಿಸಿ
ಹಠಹಿಡಿದಾಗ ಸಹಿಸಿ
ಮಿತಿಮೀರಿದಾಗ ದಂಡಿಸಿ
ಕೆಟ್ಟ ವರ್ತನೆಗೆ ಖಂಡಿಸಿ...
ಮಗುವನ್ನು
ಮನುಷ್ಯನನ್ನಾಗಿಸುವವನು
ಸರಿಯಾದ ತಂದೆ.....

ಮಗು ಬೆಳೆದು
ಸಭಲವಾಗಿ,
ಗೂಡು ತೊರೆದ
ಹಕ್ಕಿಯಾಗಿ,
ಸ್ವಂತ ಬದುಕು
ಬದುಕುವಾಗ.....

ಬೆವರು ಸುರಿಸಿ
ಬೆಳೆಸಿದ ಮರವೊಂದು
ಅನ್ಯರಿಗೆ ಹೂ ಹಣ್ಣು ನೆರಳು
ಕೊಡುವ ಪರಿಗೆ
ಪರಿತಪಿಸದೇ
ಸಂಭ್ರಮಿಸುವವ
ಶ್ರೇಷ್ಠ ತಂದೆ......!!

-ಶಶಿ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ