ಮಂಗಳವಾರ, ಜೂನ್ 9, 2015

ಸಖಿ ಗೀತೆ.... 256

ಸಖಿ....

ಯಾವಾಗಲೂ
ಬೇರೆಯವರ ಬದುಕು
ನಮ್ಮದಕ್ಕಿಂತಾ
ಚೆಂದವೆಂದುಕೊಳ್ಳುತ್ತೇವೆ...

ದೂರದ ಗುಡ್ಡ
ದೂರದಿ ನೋಡಲು
ನುಣ್ಣಗೆನ್ನುವುದ
ಮರೆಯುತ್ತೇವೆ...

ಯಾರೂ ಇಲ್ಲಿ
ಪರಿಪೂರ್ಣ ಸುಖದಲ್ಲಿಲ್ಲ,
ಅವರವರ ಸಂಕಟ
ಅವರವರಿಗೆ....

ಇರುವೆಗೆ ಇರುವೆಯ
ಭಾರವಾದರೆ..
ಆನೆಗೆ ಆನೆಯ ಭಾರ
ಎಂಬುದೇ ಈ ಕವಿತೆಯ ಸಾರ.....!!

-ಶಶಿ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ