ಮಂಗಳವಾರ, ಜೂನ್ 9, 2015

ಸಖಿ ಗೀತೆ..... 255

ಸಖಿ...

ಮಣ್ಣಿಸಿಬಿಡು
ಮನುಷ್ಯ ನಾನು
ಎಲ್ಲರಂತೆ ತಪ್ಪು
ಮಾಡುತ್ತೇನೆ....!

ಉದ್ದೇಶಪೂರ್ವಕ
ತಪ್ಪಾಗಿದ್ದರೆ
ಶಿಕ್ಷೆಯಾಗಲಿ....
ಸಾಂದರ್ಭಿಕ
ತಪ್ಪುಗಳಿಗೆಲ್ಲ
ಕ್ಷಮೆ ಇರಲಿ.....!!

ಕಾರಣ ಅರಿಯದೇ
ಯಾಕೀ
ಮಾರಣಹೋಮ...
ಪ್ರತ್ಯಕ್ಷ ಕಂಡರೂ
ಪರಿಶೀಲಿಸುವುದು
ಸಜ್ಜನರ ನಿಯಮ...!!!

ಎಲ್ಲಕ್ಕಿಂತ ಮಿಗಿಲು
ಮನುಷ್ಯ ಸಂಬಂಧ...
ಕೊನೆಯಾಗದೇ ಸಾಗಲಿ
ಸದಾ ಅನುಬಂಧ.....!!!!

-ಶಶಿ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ