ಮಂಗಳವಾರ, ಜೂನ್ 9, 2015

ಸಖಿ ಗೀತೆ.......269

ಸಖಿ...

ಕೆಲವೊಂದು
ನೆನಪುಗಳೇ
ಹೀಗೆ...

ಮನಸಿನ
ನಿಯಂತ್ರಣ ಮೀರಿ
ಕಣ್ಣಿಂದ ಜಿನುಗಿ...

ಹನಿಹನಿಯಾಗಿ
ಕೆನ್ನೆ ಮೇಲೆ
ಸುರಿಯುತ್ತವೆ.....

ಮಾತು ಮೌನವಾಗಿ
ಮೌನ ಹಿಮವಾಗಿ
ಹೆಪ್ಪುಗಟ್ಟಿದಾಗ..

ನೆನಪುಗಳ ಶಾಖಕ್ಕೆ
ನೋವು ಕರಗಿ
ತೊಟ್ಟಿಕ್ಕುತ್ತದೆ...

ನೆನಪಿನ ನೋವು
ನೋವಿನ ನೆನಪು
ನೀರಾಗಿ ಹರಿದಾಗಲೇ
ಮನಸು ಹಗುರಾಗುತ್ತದೆ....

-ಶಶಿ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ