ಮಂಗಳವಾರ, ಜೂನ್ 9, 2015

ಸಖಿ ಗೀತೆ......290

ಸಖಿ...

ಮದುವೆ ಎಂಬುದೊಂದು
ಸಂಕೀರ್ಣ ದಂಡಕಾರಣ್ಯ....
ಅಂದುಕೊಂಡಂತ್ಯಾವುದೂ ಇಲ್ಲ
ಲೆಕ್ಕಾಚಾರವೆಲ್ಲಾ ಶೂನ್ಯ...

ಇಲ್ಲಿ ಹುಲಿಯಂತಿದ್ದವರನ್ನೂ
ಮನಮೋಹಕ
ಜಿಂಕೆಗಳು
ಜೀವ ಹಿಂಡುತ್ತವೆ...

ಸಿಂಹ ತಾನೆಂದು
ಮೆರೆದವರನ್ನೂ
ಬಿಳಿ ಮೊಲಗಳು
ಬಲೆಬೀಸಿ ಪಳಗಿಸುತ್ತವೆ...

ಗೂಳಿಯಾಗಿ ಹೂಂಕರಿಸಿದವರ
ಬೀಜ ಒಡೆಯುತ್ತದೆ ಪೋರಿ
ಕೋಲೇಬಸವನಾಗುತ್ತದೆ ಹೋರಿ...
ಇದೇ ಮದುವೆಯೆಂಬ ಮಾಯದ ಮಹದಚ್ಚರಿ.....

- ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ