ಮಂಗಳವಾರ, ಜೂನ್ 9, 2015

ಸಖಿ ಗೀತೆ....264

ಸಖಿ...

ಅಂತರಜಾಲದಲ್ಲಿ
ಹಳೆದನ್ನೆಲ್ಲಾ
ಮಾರುವ ವ್ಯವಹಾರ
ಜೋರಾಗಿದೆಯಂತೆ
ನೋಡೋಣ......!

ನಮ್ಮೊಳಗಿರುವ
ನೋವು ನಿರಾಸೆ
ಕೋಪ ಹತಾಶೆ
ಸ್ವಾರ್ಥ ವಿಕಾರ
ದುರಹಂಕಾರ...
ಮಿಕ್ಕೆಲ್ಲಾ
ದುರ್ಗುಣಗಳನ್ನು
ಮಾರಿಬಿಡೋಣ......!!

ನಿತ್ಯ ನಿರಂತರ
ನೆಮ್ಮದಿ ಪಡೆದು
ಚಿನ್ನದ ಬದುಕಿಗೆ
ಬಣ್ಣವ ಬಳಿದು
ಮನುಷ್ಯರಾಗಿ ಬಿಡೋಣ....!!!

- ಶಶಿ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ