ಮಂಗಳವಾರ, ಜೂನ್ 9, 2015

ಸಖಿ ಗೀತೆ......266

ಸಖಿ...

ನನಗೂ
ನನ್ನ ಸಂಕಟಗಳನ್ನ
ಆತ್ಮೀಯರ ಜೊತೆ
ಹಂಚಿಕೊಂಡು
ಹಗುರಾಗುವಾಸೆ.....!

ಆದರೆ..
ಹಲವರಿಗೆ
ಪರರ ನೋವಿಗೆ
ಮಿಡಿಯುವ
ಆಸಕ್ತಿ ಇಲ್ಲ....

ಆಸಕ್ತಿ ತೋರಿದವರಿಗೆ
ಒಳಗೊಳಗೇ ಖುಷಿ...
ಆಡಿಕೊಳ್ಳಲವರಿಗೊಂದು
ವಿಷಯ ಸಿಕ್ಕಿತಲ್ಲಾ....!!

-ಶಶಿ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ