ಮಂಗಳವಾರ, ಜೂನ್ 9, 2015

ಸಖಿ ಗೀತೆ......274

ಸಖಿ....

ಮಕ್ಕಳ
ಭವಿಷ್ಯಕ್ಕಾಗಿ
ತನ್ನದೆಲ್ಲವ
ತ್ಯಾಗಮಾಡಿ
ಸಂತೆಯಲಿ
ಸಂತನಾಗಿ
ನಿಂತವನು
ತಂದೆ....

ನೋವು ನುಂಗಿ
ಮಕ್ಕಳ ಮುಖದಲ್ಲಿ
ಮಂದಹಾಸ
ಅರಳಿಸಲು
ಸದಾ
ಯತ್ನಿಸುವವಳು
ತಾಯಿ....

ಸ್ವಹಿತಕ್ಕಾಗಿ
ಹೆತ್ತವರ ತೊರೆದು
ಮತ್ತೊಬ್ಬರ
ಪಾಲಾಗುವವರು
ಮಕ್ಕಳು...

ಬದುಕು ಇಷ್ಟೇನೆ..

-ಶಶಿ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ