ಮಂಗಳವಾರ, ಜೂನ್ 9, 2015

ಸಖಿ ಗೀತೆ...... 259

ಸಖಿ...

ನೆಮ್ಮದಿಯ ಬದುಕಿಗೆ
ಮುತ್ತಿನಂತಾ ಮಾತೊಂದ
ಗುಟ್ಟಾಗಿ ಹೇಳತೇನೆ
ಚಿತ್ತಕೊಟ್ಟು ಕೇಳು....

ನಂಬಿದವರಿಗೆಂದೂ
ಸುಳ್ಳು ಹೇಳದಿರು...
ಸುಳ್ಳಾಡುವವರನ್ನೆಂದೂ
ನಂಬದಿರು....

ಸ್ನೇಹಿತರಿಗೆಂದೂ
ವಂಚಿಸದಿರು...
ವಂಚಕರ ಸ್ನೇಹ
ಎಂದೂ ಮಾಡದಿರು....

ವಿನಾಕಾರಣ
ಹೊಗಳದಿರು..
ಹೊಗಳುವವರಿಂದ
ತುಸು ದೂರವಿರು....

ಹಂದಿಗಳ ಜೊತೆ
ಸಹವಾಸಕ್ಕಿಂತ
ಗಂಧದ ಜೊತೆ
ಗುದ್ದಾಟ ಲೇಸು...

ಸೋಮಾರಿಗಳೊಂದಿಗೆ
ಸಹಜೀವನಕ್ಕಿಂತ
ಒಂಟಿ ಪಯಣವೇ
ಬಲು ಸೊಗಸು....!!

-ಶಶಿ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ