ಗುರುವಾರ, ಜನವರಿ 30, 2014

ಜಾಗತೀಕರಣದ ಕೂಸು :




ನೀನು ಕುಡುಕನಲ್ಲವೆಂದು ತಿಳಿದರೆ
ಕುಡಿಯಲು ಹೆಚ್ಚೆಚ್ಚು ಒತ್ತಾಯಿಸುವೆ,

ನಿನಗೆ ನನ್ನ ಸಹಾಯದ  ಅಗತ್ಯವಿಲ್ಲವೆಂದಾಗ
ಸಹಾಯಕ್ಕೆ ಸಾವಿರಪಾಲು ಮುಂದಾಗುವೆ.

ಇದೇ ನನ್ನ ನಿನ್ನ ಕೊನೆಯ ಬೇಟಿ ಎಂದು
ಖಾತ್ರಿಯಾದರೆ ತುಂಬಾ ಪ್ರೀತಿಸುತ್ತೇನೆಂದು ಹೇಳುವೆ,

ಯಾಕೆಂದರೆ ನಾನು ಜಾಗತೀಕರಣದ ಕೂಸು
ಎಲ್ಲದಕ್ಕೂ ಅಳತೆಗೋಲು ಒಂದೇ, ಅದು ಕಾಸು.



                           -ಶಶಿಕಾಂತ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ