ಸೋಮವಾರ, ಜನವರಿ 27, 2014

ಗಜಲ್ :




ನಾನು ನಿನ್ನ ನಗರಕ್ಕೆ ಅಲೆಮಾರಿಯಂತೆ ಬಂದಿದ್ದೇನೆ
ಒಂದು ಬಾರಿ ನಿನ್ನ ಮುಖ ನೋಡುವ ಅವಕಾಶ ಕೊಡು.

ನನ್ನ ಮನೆಯೆಲ್ಲಿ,  ನಾನೆಲ್ಲಿ ಠಿಕಾಣಿ ಹೂಡಲಿ?
ಮುಂಜಾನೆವರೆಗೆ ನಿನ್ನೊಡನೆ ಜಗಳಾಡಿ ಆಮೇಲೆ ನಾನೆಲ್ಲಿ ಹೋಗಲಿ?
ಯೋಚಿಸುವುದಕ್ಕಾದರೂ ಒಂದು ರಾತ್ರಿಯ ಸಮಯ ಕೊಡು.

ನನ್ನ ಕಣ್ಣುಗಳಲ್ಲಿ ಮಿಂಚುಹುಳುಗಳನ್ನೂ ಬಚ್ಚಿಟ್ಟು ಕೊಂಡಿದ್ದೇನೆ.
ರೆಪ್ಪೆಗಳಲ್ಲಿ ಕಣ್ಣೀರನ್ನು ತಡೆದಿಟ್ಟುಕೊಂಡಿದ್ದೇನೆ
ಒಂದು ಬಾರಿ ನನ್ನ ಕಣ್ಣುಗಳಲ್ಲಿ ಮಳೆ ಸುರಿಯುವ  ಅವಕಾಶ ಕೊಡು.

ಮರೆಯುವುದಾದರೆ ಯಾಕೆ ಪರಿಚಯಿಸಿಕೊಂಡೆ ನನ್ನನ್ನು
ಸಂಬಂಧ ಮುರಿದುಕೊಳ್ಳುವುದಕ್ಕೆ ಪ್ರೀತಿಸಿದೆಯಾ?
ಈ ಎರಡು ಪ್ರಶ್ನೆಗಳಿಗುತ್ತರಿಸಲಾದರೂ ಮುಖ ತೋರಿಸು.



ರಚನೆ : ಪಾಕಿಸ್ತಾನಿ ಕವಿ ಕೈಸರ್ ಅಲ್ ಜಾಪ್ರಿ
ಹಾಡಿದ್ದು : ಗುಲಾಮ್ ಅಲಿ
ಅನುವಾದ : ಶಶಿಕಾಂತ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ