ಸಮುದ್ರದ ಅಲೆಗಳು
ಏಳುತ್ತವೆ ಬೀಳುತ್ತವೆ.
ಪ್ರತಿ ಸಲ ಬಿದ್ದಾಗಲೂ
ಮತ್ತೆ ಪುಟಿದೇಳುತ್ತವೆ.
ಬದುಕಲ್ಲಿ ಸೋತವರಿಗೆ
ಪಾಠ ಹೇಳುತ್ತವೆ.
* *
* *
ಬದುಕಿನಲ್ಲಿ
ಯಾವ ತತ್ವಗಳಿಗೂ
ನಿಲುಕದ ಸತ್ಯಗಳಿವೆ.
ಪ್ರತಿಯೊಬ್ಬರ ಮನಸ್ಸಿನಲ್ಲಿ
ಯಾರ ಹಂಗಿಗೂ ನಿಲುಕದ
ಅವರವರದೇ ನಂಬಿಕೆಗಳಿವೆ.
* *
* *
ಧರ್ಮ ನಿರಪೇಕ್ಷ ಭಾರತದಲ್ಲಿ
ಧರ್ಮವೇ ಬಂಡವಾಳ.
ಬಂಡವಾಳಶಾಹಿ ದೇಶದಲ್ಲಿ
ಅಸಮಾನತೆಯೇ ಅಂತರಾಳ.
* *
* *
ಹಿಂದೆ ಮಾಡಿದ ತಪ್ಪುಗಳಿಗೆ
ಇಂದು ಕೊಡುವ ಹೆಸರು ಅನುಭವ.
-ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ